ಬಯಕೆ ತೋಟದಿಂದ...
ನನ್ನ ಬರಹಗಳನ್ನೆಲ್ಲಾ ಒಂದೆಡೆ ಸಂಗ್ರಹಿಸಿ, ಅದನ್ನು ಆತ್ಮೀಯರೊಂದಿಗೆ, ಸಹೃದಯಿಗಳೊಂದಿಗೆ ಹಂಚಿಕೊಂಡು ಅವರ ಅಭಿಪ್ರಾಯ ಪಡೆಯುವ ಹೆಬ್ಬಯಕೆಯೆ ಈ ಬ್ಲಾಗ್ ರಚನೆಗೆ ನಾಂದಿ. ಮಲಯಾಳದ ಪ್ರಭಾವ ಹೆಚ್ಚಿರುವ ಗಡಿನಾಡು ಕಾಸರಗೋಡಿನಲ್ಲಿ ಹುಟ್ಟಿದರೂ ಕನ್ನಡ (ಮಾತೃಭಾಷೆ)ವನ್ನೇ ಬಹಳವಾಗಿ ಇಷ್ಟ ಪಡುತ್ತೇನೆ. ನನ್ನ ಹಿರಿಯರು ಕನ್ನಡ ಭಾಷೆ, ಸಾಹಿತ್ಯಕ್ಕೆ ಬಹಳಷ್ಟು ಕೊಡುಗೆ ಹಾಗೂ ಮಹತ್ವ ನೀಡಿದ್ದಾರೆ. ಅಂತಹ ಕನ್ನಡ ಭಾಷೆ, ಸಾಹಿತ್ಯವನ್ನು ಉಳಿಸಿ, ಬೆಳೆಸುವುದು ನನ್ನ ಕರ್ತವ್ಯ ಹಾಗೂ ಜವಾಬ್ದಾರಿ. ಅದಕ್ಕಾಗಿ ಈ ಬ್ಲಾಗ್ ಮುಖೇನ ಒಂದಿಷ್ಟು ಸೇವೆ ಸಲ್ಲಿಸ ಬಯಸಿದ್ದೇನೆ. ನನ್ನ ಈ ಪ್ರಯತ್ನದಲ್ಲಿ ಎನಾದರೂ ತಪ್ಪುಗಳಾದರೆ ಕ್ಷಮೆ ಇರಲಿ.
- ಗಣು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ