ಭಾನುವಾರ, ಸೆಪ್ಟೆಂಬರ್ 30, 2012

ಯುವಕರಿಗೆ ಬೇಡವಾಗುತ್ತಿರುವ ಪಂಚೆ


ಹೌದು! ಇಂದು ಯುವಕರಿಂದ ಹಿಡಿದು ಮುದುಕರವರೆಗೆ ಹೆಚ್ಚಿನ ಎಲ್ಲರೂ ಪಂಚೆyuvakrige bedavaguttiruva panche ಉಡುವುದನ್ನೇ ಬಿಟ್ಟು ಬಿಟ್ಟಿದ್ದಾರೆ. ವಿದೇಶಿ ಉಡುಪುಗಳಾದ ಪ್ಯಾಂಟು, ಬರ್ಮುಡ ಚಡ್ಡಿ ಇತ್ಯಾದಿಗಳನ್ನೇ ಧರಿಸುತ್ತಾರೆ. ಭಾರತೀಯರಾದ ನಾವು ಇಂದು ನಮ್ಮ ನಾಡಿನ ಸಾಂಪ್ರದಾಯಿಕ ಉಡುಪುಗಳಾದ ಪಂಚೆ, ಲುಂಗಿ ಉಡುವುದು, ಕಚ್ಚೆ ಹಾಕುವುದನ್ನು ಮರೆತ್ತೇ ಬಿಟ್ಟಿದ್ದೇವೆ ಎಂದೆನ್ನಿಸುತ್ತದೆ. ಯುವಜನಾಂಗವಂತೂ ಪಂಚೆ ಉಡುವುದರಿಂದ ಮಾರುದೂರ ಸರಿದಂತಿದೆ.
ಹಿಂದಿನ ಕಾಲದಲ್ಲಿ ಹಳ್ಳಿಗರಿಂದ ಹಿಡಿದು ಪಟ್ಟಣಿಗರವರೆಗೆ ಎಲ್ಲರೂ ಪಂಚೆಯನ್ನೇ ಉಡುತ್ತಿದ್ದರು. ಕಾಲ ಸರಿದಂತೆ ಉಡುಪಿನ ಮೇಲೂ ಆಧುನಿಕತೆಯ ಪ್ರಭಾವ ಉಂಟಾಯಿತು. ಇದರಿಂದ ವಸ ಸಂಹಿತೆ ಬದಲಾಗಿ ಜನರು ವೈವಿಧ್ಯಮಯ ಉಡುಪುಗಳನ್ನು ಧರಿಸತೊಡಗಿದರು. ಜನರು ಶೈಕ್ಷಣಿಕವಾಗಿ ಮುಂದುವರಿದಾಗ ವಿವಿಧ ತರದ ವಸ ವಿನ್ಯಾಸಗಳನ್ನು ಕಲಿತುಕೊಂಡರು.
 ಹಲವಾರ ವರ್ಷಗಳ ಕಾಲ ನಮ್ಮ ದೇಶವನ್ನು ಆಳಿದ ಬ್ರಿಟಿಷರು ಬಳಸುತ್ತಿದ್ದ ವಸ ವೈವಿಧ್ಯಗಳು ಕೂಡ ನಮ್ಮನ್ನು ಬಹಳವಾಗಿ ಆಕರ್ಷಿಸಿದೆ. ಇಂದು ನಾವು ಹೆಚ್ಚಾಗಿ ಆಂಗ್ಲರು ಬಳಸುವ ರೀತಿಯ ವಸಗಳನ್ನೇ ಉಪಯೋಗಿಸುತ್ತೇವೆ. ಯಾಕೆಂದರೆ ಅವುಗಳನ್ನು ಧರಿಸುವುದು ಸುಲಭ ಎಂದು. ಆದರೆ ಅವುಗಳ ತಯಾರಿಗೆ ಅಷ್ಟೇ ಪರಿಶ್ರಮ ಪಡಬೇಕಾಗುತ್ತದೆ. ಹಲವಾರು ವರ್ಷಗಳ ಹಿಂದೆ ಭಾರತೀಯರು ಮನೆಯಲ್ಲಿದ್ದರೂ ಅಥವಾ ಯಾವುದೇ ಕೆಲಸಗಳಿಗಾಗಿ ಹೊರಗಡೆ ತೆರಳುವುದಿದ್ದರೂ ಪಂಚೆ ಉಡುವುದು ಅಥವಾ ಕಚ್ಚೆ ಹಾಕುತ್ತಿದ್ದರು.
ಸ್ವಾತಂತ್ರ್ಯಾ ಅನಂತರ ಹೆಚ್ಚಿನ ಜನ ಕೋರ್ಟ್, ಕಚೇರಿ ಪಟ್ಟಣಗಳಿಗೆ ಹೋಗುವಾಗ ಪ್ಯಾಂಟ್, ಯಾವುದಾದರೂ ಶುಭಕಾರ್ಯಗಳಿಗೆ, ದೇವಸ್ಥಾನಕ್ಕೆ ಉತ್ಸವ ಇತ್ಯಾದಿಗಳಿಗೆ ತೆರಳುವಾಗ, ಮನೆಯಲ್ಲಿರುವಾ ಪಂಚೆ ಅಥವಾ ಲುಂಗಿ ಉಡುವುದು ಅಥವಾ ಕಚ್ಚೆ ಹಾಕುವುದು ಸಾಮಾನ್ಯವಾಗಿತ್ತು. ಕಾಲ ಬದಲಾದಂತೆ ಜಾಗತೀಕರಣದ ಪ್ರಭಾವ ಹೆಚ್ಚಾಯಿತು. ಅದು ಲುಂಗಿ, ಪಂಚೆ, ಕಚ್ಚೆಗಳ ಮೇಲೂ ತನ್ನ ಪ್ರಭಾವ ಬೀರಿತು. ಪಂಚೆ ಉಡುವುದು ಕಷ್ಟದ ಕೆಲಸ. ಅದನ್ನು ಉಟ್ಟು ನಡೆದಾಡುವುದು, ತಮ್ಮ ಕೆಲಸಗಳನ್ನು ನಿರ್ವಹಿಸುವುದು ಈಗಿನವರಿಗೆ ತುಂಬಾ ಕಷ್ಟ. ಯಾಕೆಂದರೆ ಇಂದಿನವರಿಗೆ ಪಂಚೆ ಉಡುವ ಕ್ರಮವೇ ಸರಿಯಾಗಿಗೋತ್ತಿಲ್ಲ. ಆದರೆ ಪಂಚೆ ಉಡುವುದು ನಮ್ಮ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಅದು ಹೇಗೆಂದರೆ, ನಮ್ಮ ದೇಹದ ಎಲ್ಲಾ ಭಾಗಗಳಲ್ಲಿಯೂ ಬೆವರು ಉತ್ಪತ್ತಿಯಾಗುತ್ತದೆ. ಗಾಳಿ ದೇಹದ ಎಲ್ಲಾ ಭಾಗಗಳನ್ನು ಸ್ಪರ್ಶಿಸುತ್ತಿದ್ದರೆ ಬೆವರು ಗಾಳಿಯಲ್ಲಿ ತನ್ನಷ್ಟಕ್ಕೆ ಆವಿಯಾಗುತ್ತದೆ. ದಪ್ಪಗಿನ ಬಟ್ಟೆ ಧರಿಸುವುದರಿಂದ ಇದು ಕಷ್ಟಕರ ಸಂಗತಿ. ಇದರಿಂದ ಬೆವರುವುದು ಹೆಚ್ಚಿ ತುರಿಕೆ, ಗಜ್ಜಿ ಇತ್ಯಾದಿ ತೊಂದರೆಗಳು ಉಂಟಾಗುತ್ತದೆ. ಇದು ಸಮತೋಲನವನ್ನು ಕೆಡಿಸುತ್ತದೆ. ಪಂಚೆ ಇತರ ಬಟ್ಟೆಗಳಿಗಿಂತ ತೆಳ್ಳಗಿರುತ್ತದೆ. ಅದನ್ನು ಉಡುವುದರಿಂದ ದೇಹದ ಎಲ್ಲಾ ಭಾಗಕ್ಕೂ ಗಾಳಿ ಸುಲಭವಾಗಿ ತಗುಲುವುದು. ಇದರಿಂದ ಕೆಲವೊಂದು ಆರೋಗ್ಯ ಸಮಸ್ಯೆಗಳನ್ನು ತಡೆಯಬಹುದಾಗಿದೆ.
ಭಾರತದ ಕೆಲವೊಂದು ರಾಜ್ಯಗಳಲ್ಲಿ ಇಂದಿಗೂ ಪಂಚೆಗೆ ಬಹಳಷ್ಟು ಮಹತ್ವವಿದೆ. ಮುಖ್ಯವಾಗಿ ಕೇರಳ, ತಮಿಳುನಾಡು ಮೊದಲಾದೆಡೆ ಸಾಮಾನ್ಯ ಜನರಿಂದ ಹಿಡಿದು ರಾಜಕಾರಣಿಗಳವರೆಗೆ ಹೆಚ್ಚಿನ ಎಲ್ಲರೂ ಪಂಚೆಯನ್ನೇ ಉಡುತ್ತಾರೆ. ಅಲ್ಲಿನ ಚಲನಚಿತ್ರಗಳಲ್ಲಿಯೂ ಕಲಾವಿದರು ಹೆಚ್ಚಾಗಿ ಬಳಸುವ ಉಡುಪು ಪಂಚೆ ಉಟ್ಟು ನಟಿಸುತ್ತಾರೆ. ಮುಖ್ಯವಾಗಿ ನಮ್ಮ ರಾಜ್ಯದಲ್ಲಿಯೇ ಇಂದು ಪಂಚೆ ಉಡುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಆದರೆ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಇಂದಿಗೂ ಹಲವಾರು ಜನ ಪಂಚೆ, ಕಚ್ಚೆಗಳನ್ನೇ ಬಳಸುತ್ತಿರುವುದನ್ನು ಕಾಣಬಹುದಾಗಿದೆ. ಇತ್ತೀಚಿನ ವರ್ಷಗಳಲ್ಲಿ ನಡೆದ ಕೆಲವೊಂದು ಗಣ್ಯವ್ಯಕ್ತಿಗಳ ಪಂಚೆ ಎಳೆದ ಪ್ರಕರಣಗಳು ಕೂಡ ಹಲವರು ಪಂಚೆ ಉಸಾಬರಿ ಬೇಡ ಎನ್ನಲು ಕಾರಣವಾಗಿರಬಹುದು. ಭಾರತೀಯರ ಸಾಂಪ್ರದಾಯಿಕ ಉಡುಪು ಇದಾಗಿರುವುದರಿಂದ ಇಂದಿನ ಜನ ಪಂಚೆ ಉಡುವುದನ್ನು ಮರೆಯುತ್ತಿರುವುದು ಬೇಸರದ ಸಂಗತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ